ಇತಿಹಾಸ

ಹಿಂದು ವಿದ್ಯಾದಾಯಿನೀ ಸಂಘ (ರಿ.) , ಸುರತ್ಕಲ್

ಶತಮಾನ ಕಂಡ ಹಿಂದು ವಿದ್ಯಾದಾಯಿನೀ ಸಂಘ (ರಿ.) , ಸುರತ್ಕಲ್ - 1916 - 2016

ಶತಮಾನಗಳ ಹಿಂದೆ ಸುರತ್ಕಲ್ ಪ್ರದೇಶವು ಒಂದು ಗುಡ್ಡ ಪ್ರದೇಶವಾಗಿತ್ತು. ಸುತ್ತಮುತ್ತ ಹೊಸಬೆಟ್ಟು, ಮೈರ್ಪಾಡಿ, ಕಟ್ಲ, ಅಯ್ಯಕೆರೆ, ಗುಡ್ಡೆಕೊಪ್ಲ, ಕಲ್ಯಾಣಿಪಡ್ಪು ಹಾಗೂ ಇನ್ನಿತರ ಪ್ರಾದೇಶಿಕ ಸ್ಥಳಗಳು ಇದ್ದವು. ಎತ್ತಿನ ಗಾಡಿಯಷ್ಟೇ ಹೋಗುವ ದಾರಿಯು ಉಪ್ಪಜೆಯಿಂದ ಕೆಳಭಾಗದಲ್ಲಿ ಗುಡ್ಡೆಕೊಪ್ಲವಾಗಿ ಸುರತ್ಕಲ್ ದೇವಾಲಯದತ್ತ ಪಡುಕರೆಯಲ್ಲಿ ಸಾಗುತ್ತಿತ್ತು. ಸುತ್ತಮುತ್ತ ತೆಂಗು, ಕಂಗು, ಬತ್ತದ ಗದ್ದೆಗಳು, ಸಮೀಪದಲ್ಲೇ ಭೋರ್ಗರೆಯುವ ಸಮುದ್ರ.

ದಾರಿ ದೀಪವಾಗಿ ಅಲ್ಲಲ್ಲಿ ಚಿಮಣಿ ಲಾಟೀನ್‍ಗಳನ್ನು, ಕುದುರೆಗಾಡಿ ದೀಪಗಳನ್ನು ನೇತಾಡಿಸುವ ಕಾಲವದು. ಮುಂಜಾವದ ಹೊತ್ತು ಗೆಜ್ಜೆ ಶಬ್ದದೊಂದಿಗೆ ದಂಡಧಾರಿ ಅಂಚೆ ಜವಾನ ಈ ಮಾರ್ಗದಲ್ಲಿ ನಡೆದು ಹೋದನೆಂದರೆ ಬೆಳಗ್ಗಿನ 5 ಗಂಟೆಯ ಸಮಯವೆಂದು ಭಾವಿಸುತ್ತಿದ್ದ ಕಾಲ.

ವಿದ್ಯಾ ಶತಕ

ವಿದ್ಯಾ ಶತಕ – ಶತಮಾನೋತ್ಸವ ಸ್ಮರಣ ಸಂಚಿಕೆ.