Vidyadayinee  Govinda Dasa Old Students’ Association

ವಿದ್ಯಾದಾಯಿನೀ ಗೋವಿಂದ ದಾಸ ಹಳೆ ವಿದ್ಯಾರ್ಥಿ ಸಂಘ : ( 1936 )

1936ರಲ್ಲಿ ಸ್ಥಾಪನೆಗೊಂಡ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘವು ಜಿಲ್ಲೆಗೊಂದು ಮಾದರಿಯಂತಿದ್ದು ಇಷ್ಟು ಸುದೀರ್ಘ ಕಾಲ ತನ್ನ ಮಾತೃ ಸಂಸ್ಥೆಯೊಂದಿಗೆ ಒಡನಾಟವನ್ನಿಟ್ಟುಕೊಂಡು ಸಂಸ್ಥೆಗಳ ಎಲ್ಲಾ ಉತ್ಸವಗಳ ಸಂದರ್ಭಗಳಲ್ಲಿ ಶಾಶ್ವತವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ವಿದ್ಯಾದಾಯಿನೀ ಶಾಲೆಯಲ್ಲಿ, ಗೋವಿಂದ ದಾಸ ಕಾಲೇಜಿನಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳಿಂದು ತಮಗೆ ವಿದ್ಯಾದಾನ ನೀಡಿದ ಗುರುಗಳನ್ನು, ಸಂಸ್ಥೆಗಳನ್ನು ಮರೆತಿಲ್ಲ. ಯಾವುದೇ ಊರಿಗೆ ಹೋದರೂ ಅಲ್ಲಿ ‘ವಿದ್ಯಾದಾಯಿನಿ’ ಯವರಿದ್ದಾರೆ ಎನ್ನುವುದೇ ನಮಗೊಂದು ಹೆಮ್ಮೆ. ತನ್ನ ಸ್ಥಾಪನಾಕಾಲದಿಂದಲೂ ಆಡಳಿತ ಮಂಡಳಿಗೆ ಹೆಗಲು ಕೊಟ್ಟು ಎಲ್ಲಾ ಶಿಕ್ಷಣ ಸಂಸ್ಥೆಗಳ ಏಳಿಗೆಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡುತ್ತಾ ಬಂದಿದೆ. ಹಾಗಾಗಿ ಹಳೆ ವಿದ್ಯಾರ್ಥಿ ಸಂಘವು ಮಾತೃ ಸಂಸ್ಥೆಯ ‘ಬೆಂಬಿಡದ ಪಯಣಿಗ’ ಎನ್ನುವ ಅನ್ವರ್ಥವನ್ನು ಹೊಂದಿ ಸಾರ್ಥಕ್ಯವಾಗಿದೆ.

ಶತಮಾನದ ಹೊಸ್ತಿಲನ್ನು ದಾಟಿ ಮುನ್ನಡೆಯುತ್ತಿರುವ ಈ ಸುಸಂದರ್ಭದಲ್ಲಿ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗಳು ಸುಮಾರು 3500 ವಿದ್ಯಾರ್ಥಿಗಳನ್ನು 200 ಶಿಕ್ಷಕರು ಹಾಗೂ ಆಡಳಿತಾತ್ಮಕ ಸಿಬ್ಬಂದಿಗಳನ್ನು ಹೊಂದಿದೆ.  ಸುರತ್ಕಲ್ ಸುತ್ತಮುತ್ತಲಿನ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು ಅಕ್ಕರೆಯಿಂದ ವಿದ್ಯಾದಾಯಿನಿಯ ನವನವೀನ ಕಲ್ಪನೆ, ಯೋಜನೆಗಳಿಗೆ ಹಲವಾರು ರೀತಿಗಳಿಂದ ಸಹಾಯವನ್ನು, ಬೆಂಬಲವನ್ನು ನೀಡಿ ಸಹಕರಿಸಿರುತ್ತಾರೆ.  ಅತ್ಯುತ್ತಮ ಗುಣಮಟ್ಟದ ಗ್ರಂಥಾಲಯ, ಪ್ರಯೋಗಾಲಯ, ವಿಶಾಲವಾದ ಆಟದ ಮೈದಾನು, ಸುಂದರವಾದ ಕಟ್ಟಡ, ಪೀಠೋಪಕರಣ, ಮೇಲಾಗಿ ಸಮರ್ಪಣ ಭಾವದ ಶಿಕ್ಷಕರು, ಸಿಬ್ಬಂದಿಗಳು ಇದ್ದು ಒಟ್ಟು 22 ಎಕ್ಕರೆ ವಿಸ್ತಾರವಾದ ಜಮೀನನ್ನು ಹೊಂದಿದೆ.  ಸುರತ್ಕಲ್ಲಿನ ನಡುಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡು ಬೆಳೆದು ನಿಂತಿರುವ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ದಿಟ್ಟ ಆಡಳಿತ ಮಂಡಳಿಯು ಇದೆ.  ಒಟ್ಟಿನಲ್ಲಿ ಜ್ಞಾನ-ವಿಜ್ಞಾನ-ಕಲೆಗಳಿಗೆ ಸುಸಂಸ್ಕøತ ತೈಲವೆರೆಯುವ ವಿದ್ಯಾದೇವತೆ “ ವಿದ್ಯಾದಾಯಿನಿ “ಗೆ ನೂರು ತುಂಬಿದ ಸಂಭ್ರಮ.